ನಿಮ್ಮ ತೂಕ ಇಳಿಕೆಗೆ ಹೀಗೆ ಮಾಡಿ | Weight Loss Tips In Kannada
ನಿಮ್ಮ ತೂಕ ಇಳಿಕೆಗೆ ಹೀಗೆ ಮಾಡಿ | Weight Loss Tips In Kannada
ತೂಕ ಕಡಿಮೆ ಮಾಡುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದೀರಾ? ತೂಕವನ್ನು ಕಳೆದುಕೊಳ್ಳಲು ಕೆಲವು ಸುಲಭ ಮಾರ್ಗಗಳಿವೆ. ಆ ಮಾರ್ಗಗಳ ಮೂಲಕ ನೀವು ಆಹಾರ ಮತ್ತು ಪಾನೀಯವನ್ನು ತ್ಯಜಿಸದೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಬರೀ ಆಹಾರ ಪಾನೀಯವನ್ನು ತ್ಯಜಿಸಿ ತೂಕ ಕಡಿಮೆಮಾಡಿಕೊಳ್ಳಬೇಕೆಂದಿಲ್ಲ.
ಹೊಟ್ಟೆಯ ಬೊಜ್ಜು, ಅತಿಯಾದ ತೂಕ ಇಂದಿನ ಬಹುದೊಡ್ಡ ಸಮಸ್ಯೆಯಾಗುತ್ತಿದೆ. ಇದಕ್ಕೆಲ್ಲ ಕಾರಣ ಕೆಟ್ಟ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿ ಯಾಗಿದೆ. ತೂಕ ಹೆಚ್ಚಾಗುವುದರಿಂದ ನಮ್ಮ ಸೌಂದರ್ಯ ಹಾಳಾಗುವುದಲ್ಲದೇ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನುಂಟುಮಾಡುತ್ತದೆ. ಅಧಿಕ ತೂಕ ಮತ್ತು ಬೊಜ್ಜು ಮಧುಮೇಹ, ಕ್ಯಾನ್ಸರ್, ಹೃದ್ರೋಗದಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಇಳಿಸಿಕೊಳ್ಳಲು ಜಿಮ್ ಮತ್ತು ಡಯಟ್‌ನಲ್ಲಿ ಸಾಕಷ್ಟು ಹಣವನ್ನು ಖರ್ಚು ಮಾಡುವುದನ್ನು ನಾವು ಕಾಣಬಹುದು. ನೀವು ಜಿಮ್ ಮತ್ತು ಡಯಟ್ ಇಲ್ಲದೆ ಅಥವಾ ಆಹಾರ ಮತ್ತು ಪಾನೀಯವನ್ನು ತ್ಯಜಿಸದೆ ತೂಕವನ್ನು ಕಳೆದುಕೊಳ್ಳಲು ಬಯಸಿದರೆ, ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಕೆಲವು ಸುಲಭ ಮಾರ್ಗಗಳಿಂದ ತೂಕವನ್ನು ಕಳೆದುಕೊಳ್ಳಬಹುದು. ಅದಕ್ಕಾಗಿ ನೀವು ಆಹಾರ ಮತ್ತು ಪಾನೀಯವನ್ನು ತ್ಯಜಿಸಬೇಕಾಗಿಲ್ಲ. ಹೌದು, ನಿಮಗೆ ಆಶ್ಚರ್ಯವಾಗುತ್ತಿರಬೇಕಲ್ಲ? ಉದಾಹರಣೆಗೆ, ನೀವು ಊಟಕ್ಕೆ ಮುಂಚಿತವಾಗಿ ನೀರನ್ನು ಕುಡಿದರೆ, ಅದು ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಅಂತಹ ಕೆಲವು ವಿಧಾನಗಳ ತೂಕವನ್ನು ಕಳೆದುಕೊಳ್ಳುವ ಬಗ್ಗೆ ನಾವು ತಿಳಿದುಕೊಳ್ಳೋಣ.
Weight Loss Tips In Kannada
1. ತಿನ್ನುವ ಮೊದಲು ನೀರು ಕುಡಿಯಿರಿ:
ಊಟಕ್ಕೆ 30 ನಿಮಿಷಗಳ ಮೊದಲು ಸುಮಾರು 16 ಔನ್ಸ್ ನೀರು ಕುಡಿಯುವುದು ನಿಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ. ನೀವು ಆಹಾರ ತಿನ್ನುವ ಮೊದಲು ದಿನಕ್ಕೆ 1-1.5 ಲೀಟರ್ (34-50 ಔನ್ಸ್) ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
2. ಪ್ರೋಟೀನ್ ಭರಿತ ಆಹಾರ ಸೇವಿಸಿ:
ನೀವು ಪ್ರೋಟೀನ್ ಭರಿತ ಆಹಾರವನ್ನು ಸೇವಿಸಲು ಪ್ರಾರಂಭಿಸಿದಾಗ, ಇತರ ಆಹಾರವನ್ನು ತಿನ್ನಲು ನಿಮಗೆ ಹೆಚ್ಚು ಅನಿಸುವುದಿಲ್ಲ. ಈ ಕಾರಣದಿಂದಾಗಿ ನೀವು ಹೆಚ್ಚು ಕ್ಯಾಲೊರಿಗಳನ್ನು ಸೇವಿಸಲು ಸಾಧ್ಯವಾಗುವುದಿಲ್ಲ. ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳಲು ಮಾತ್ರವಲ್ಲದೆ ಸ್ನಾಯುಗಳು ಬಲಗೊಳ್ಳುತ್ತವೆ.
Read More: Sugar Control Food In Kannada | ಮಧುಮೇಹ
3. ಯಾವಾಗಲೂ ಶಾಂತವಾಗಿ ತಿನ್ನಿರಿ:
ಇಂದಿನ ಫಾಸ್ಟೆಸ್ಟ್ ಯುಗದಲ್ಲಿ ಯಾವುದಕ್ಕೂ ನಮಗೆ ಸಮಯವೇ ಇರುವುದಿಲ್ಲ. ಈ ಸಮಯದ ಕೊರತೆಯಿಂದಾಗಿ, ನಾವು ಆಹಾರ ತಿನ್ನಲು ಸಮಯವನ್ನು ಕೊಡಲಾಗದೆ ಪ್ರಯಾಣದಲ್ಲಿರುವಾಗ ತಿನ್ನುವ ಸ್ಥಿತಿ ಬಂದಿದೆ. ಇದರಿಂದಾಗಿ ತೂಕವು ಹೆಚ್ಚು ವೇಗವಾಗಿ ಹೆಚ್ಚಾಗುತ್ತದೆ. ಆಹಾರವನ್ನು ಯಾವಾಗಲೂ ಆರಾಮವಾಗಿ ಕುಳಿತು ತಿನ್ನಬೇಕು, ಏಕೆಂದರೆ ಕುಳಿತುಕೊಂಡೇ ನೀವು ಸರಿಯಾಗಿ ತಿಂದಿದ್ದೀರಿ ಎಂಬ ಸಂದೇಶವನ್ನು ಮೆದುಳಿಗೆ ರವಾನಿಸುತ್ತದೆ, ಇದರಿಂದ ನೀವು ದಿನವಿಡೀ ಅತಿಯಾಗಿ ತಿನ್ನುವ ಸಾಧ್ಯತೆ ಕಡಿಮೆ ಇರುತ್ತದೆ.
4. ಚೆನ್ನಾಗಿ ಅಗಿದು ತಿನ್ನಿ:
ನಿಮ್ಮ ಆಹಾರವನ್ನು ನೀವು ಸಂಪೂರ್ಣವಾಗಿ ಅಗಿಯಬೇಕು. ಜಗಿಯುವುದರಿಂದ ದೇಹವು ಜೀರ್ಣಕ್ರಿಯೆಯ ಸಮಯದಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಸುಡುವಂತೆ ಮಾಡುತ್ತದೆ. ಅಲ್ಲದೆ, ನಿಧಾನವಾಗಿ ಅಗಿಯುವುದರಿಂದ ಹೊಟ್ಟೆಗೆ ರಕ್ತದ ಹರಿವನ್ನು ಸುಧಾರಿಸಬಹುದು. ಹೀಗಾಗಿ ಚೆನ್ನಾಗಿ ಅಗಿದು ತಿನ್ನುವುದರಿಂದಲೂ ನಮ್ಮ ತೂಕವನ್ನು ಇಳಿಸಬಹುದು.
Read More: Carom Seeds In Kannada | Ajwain In Kannada
5. ಸರಿಯಾದ ವ್ಯಾಯಾಮ:
ಪ್ರತಿದಿನ ಸರಿಯಾದ ವ್ಯಾಯಾಮ ಮಾಡಿದಲ್ಲಿ ತೂಕವನ್ನು ಇಳಿಸಬಹುದು. ಇದು ನಮ್ಮ ಆರೋಗ್ಯಕ್ಕೂ ಒಳ್ಳೇದು. ತೂಕ ಇಳಿಸಲು ಯಾವುದ್ಯಾವುದೋ ಮಾತ್ರೆಗಳನ್ನು ತೆಗೆದು ಕೊಳ್ಳುವುದಕ್ಕಿಂತ ವ್ಯಾಯಾಮ ಮಾಡುವುದು ಉತ್ತಮ.