Vibhakti Pratyaya In Kannada | ವಿಭಕ್ತಿ ಪ್ರತ್ಯಯಗಳು
Vibhakti Pratyaya in Kannada | ವಿಭಕ್ತಿ ಪ್ರತ್ಯಯಗಳು | Kannada Vibhakti Pratyaya
ವಿಭಕ್ತಿ ಪ್ರತ್ಯಯಗಳು ಎಂದರೇನು? (What is Vibhakti pratyaya)
ವಿಭಕ್ತಿ ಪ್ರತ್ಯಯಗಳು ಕನ್ನಡ ವ್ಯಾಕರಣದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ನಾಮ ಪದಗಳ ಮೂಲ ರೂಪಕ್ಕೆ ನಾವು ನಾಮ ಪ್ರಕೃತಿ ಎಂದು ಹೇಳುತ್ತೇವೆ. ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿದರೆ ನಾಮಪದಗಳಾಗುತ್ತವೆ. ಇವು ಸ್ವತಂತ್ರವಾಗಿ ಅರ್ಥವನ್ನು ಕೊಡುವುದಿಲ್ಲ ಬದಲಿಗೆ ನಾಮಪ್ರಕೃತಿಗಳ ಮುಂದೆ ಸೇರಿ ಬೇರೆ ಬೇರೆ ಅರ್ಥವನ್ನು ಕೊಡುವ ಅಕ್ಷರಗಳಾಗಿವೆ. ಇಂತಹ ಅಕ್ಷರಗಳನ್ನು ವಿಭಕ್ತಿ ಪ್ರತ್ಯಯಗಳು ಎಂದು ಕರೆಯುತ್ತಾರೆ.
ಉದಾಹರಣೆ : ಗೆ, ಯು, ಅನ್ನು,ಇಂದ, ಅಲ್ಲಿ, ಅಂತ್ತಣಿಂ ಇತ್ಯಾದಿ.
ಹಾಗಾಗಿ ನಾಮ ಪ್ರಕೃತಿಗಳ ಜೊತೆ ಸೇರುವ ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಕರೆಯುತ್ತಾರೆ. ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲು ಸೇರಿರುವ ಪ್ರತ್ಯಯಕ್ಕೆ ಕೂಡ ವಿಭಕ್ತಿ ಪ್ರತ್ಯಯವೆಂದುಹೆಸರು.
ನಾಮಪದ ಎಂದರೇನು? (What is Namapada?)
ನಾಮಪ್ರಕೃತಿ + ವಿಭಕ್ತಿ ಪ್ರತ್ಯಯ = ನಾಮಪದ
ಮನೆ + ಉ = ಮನೆಯು
ನಾಮಪ್ರಕೃತಿ : ರಾಮ
ರಾಮ ಎಂಬ ನಾಮಪದಕ್ಕೆ ಎಂಟು ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವುದು ಹೇಗೆಂದು ಕೆಳಗೆ ಕೊಡಲಾಗಿದೆ.
ಪ್ರಥಮಾ ವಿಭಕ್ತಿ: ರಾಮ + ಉ = ರಾಮನು
ದ್ವಿತೀಯಾ ವಿಭಕ್ತಿ: ರಾಮ + ಅನ್ನು = ರಾಮನನ್ನು
ತೃತೀಯಾ ವಿಭಕ್ತಿ: ರಾಮ + ಇಂದ = ರಾಮನಿಂದ
ಚತುರ್ಥೀ ವಿಭಕ್ತಿ: ರಾಮ + ಗೆ = ರಾಮನಿಗೆ
ಪಂಚಮೀ ವಿಭಕ್ತಿ: ರಾಮ + ದೆಸೆಯಿಂದ = ರಾಮನ ದೆಸೆಯಿಂದ
ಷಷ್ಠೀ ವಿಭಕ್ತಿ: ರಾಮ + ಅ = ರಾಮನ
ಸಪ್ತಮೀ ವಿಭಕ್ತಿ: ರಾಮ + ಅಲ್ಲಿ = ರಾಮನಲ್ಲಿ ಮನೆಯೊಳು, ಮನೆಯಾಗ
ಸಂಭೋದನ ವಿಭಕ್ತಿ: ರಾಮ + ಏ = ರಾಮನೇ
ನಾಮಪ್ರಕೃತಿ : ಅಣ್ಣ
ವಿಭಕ್ತಿಯ ಹೆಸರು ಪ್ರತ್ಯಯ
1)ಪ್ರಥಮವಿಭಕ್ತಿ – ಉ
2)ದ್ವಿತೀಯವಿಭಕ್ತಿ – ಅನ್ನು
3)ತೃತೀಯವಿಭಕ್ತಿ – ಇಂದ
4)ಚತುರ್ಥಿವಿಭಕ್ತಿ – ಗೆ, ಇಗೆ
5)ಪಂಚಮಿವಿಭಕ್ತಿ – ದೆಸೆಯಿಂದ
6)ಷಷ್ಠಿವಿಭಕ್ತಿ – ಅ
7)ಸಪ್ತಮಿವಿಭಕ್ತಿ – ಅಲ್ಲಿ
8)ಸಂಭೋಧನವಿಭಕ್ತಿ – ಮ, ಆ, ಇರಾ, ಏ