Lyrics

ತರವಲ್ಲ ತಗಿ ನಿನ್ನ ತಂಬೂರಿ | Taravalla Tagi Ninna Tamburi Lyrics In Kannada

ಶಿಶುನಾಳ ಶರೀಫರ ಪದಗಳು:

ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ (2) (ಪ )

ಸರಸ ಸಂಗೀತದ ಕುರುಹುಗಳ ಅರಿಯದೆ
ಬರಿದೆ ಬಾರಿಸದಿರು ತಂಬೂರಿ

ಮದ್ದಾಲಿ ದನಿಯೊಳು ತಂಬೂರಿ ಆದ
ತಿದ್ದಿ ನುಡಿಸಾಬೇಕು ತಂಬೂರಿ

ಸಿದ್ದ ಸಾಧಕರ ವಿದ್ಯೆಗೆ ಒದಗುವ
ಬುದ್ಧಿವಂತಕೆ ತಕ್ಕ ತಂಬೂರಿ

ತರವಲ್ಲ ತಾಗಿ ನಿನ್ನ ತಂಬೂರಿ ಸ್ವರ, ಬರದೇ ಬಾರಿಸದಿರು ತಂಬೂರಿ (1)

ಬಾಳ ಬಲ್ಲವರಿಗೆ ತಂಬೂರಿ ದೇವಾ
ಬಾಳಾಕ್ಷ ರಚಿಸಿದ ತಂಬೂರಿ

ಹೇಳಲಿ ಏನಿದರ ಹಂಚಿಕೆ ತಿಳಿಯದ
ತಾಳಗೇಡಿಗೆ ಸಲ್ಲ ತಂಬೂರಿ

ತರವಲ್ಲ ತಾಗಿ ನಿನ್ನ ತಂಬೂರಿ ಸ್ವರ, ಬರದೇ ಬಾರಿಸದಿರು ತಂಬೂರಿ (1)

ಸತ್ಯ ಶರಧಿಯೊಳು ತಂಬೂರಿ – ನಿತ್ಯ
ಉತ್ತಮರಾಡುವ ತಂಬೂರಿ

ಬತ್ತೀಸರಾಗದ ಬಗೆಯನರಿಯದಂಥ
ಕತ್ತಿಗಿನ್ಯಾತಕೆ ತಂಬೂರಿ.

ತರವಲ್ಲ ತಾಗಿ ನಿನ್ನ ತಂಬೂರಿ ಸ್ವರ, ಬರದೇ ಬಾರಿಸದಿರು ತಂಬೂರಿ (1)

ಹಸನಾದ ಮೆಳಕ್ಕೆ ತಂಬೂರಿ ಇದು
ಕುಶಲರಿಗೊಪ್ಪುವ ತಂಬೂರಿ

ಶಿಶುನಾಳದೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ

ತರವಲ್ಲ ತಾಗಿ ನಿನ್ನ ತಂಬೂರಿ ಸ್ವರ, ಬರದೇ ಬಾರಿಸದಿರು ತಂಬೂರಿ (1)

Hanuman Chalisa Lyrics In Kannada | ಹನುಮಾನ್ ಚಾಲಿಸಾ

Prachi

NCERT-NOTES Class 6 to 12.

Leave a Reply

Your email address will not be published. Required fields are marked *

Back to top button