Kannada

Post Office Mahila Samman Yojana in 2023 | ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ

Mahila Samman Saving Certificate Scheme

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2023-24 ಅನ್ನು ಮಂಡಿಸುವಾಗ ಈ ಬಾರಿಯ ಬಜೆಟ್ ನಲ್ಲಿ ಹಣಕಾಸು ಸಚಿವರು ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಬಜೆಟ್ ಮಂಡಿಸುವಾಗ ಹಣಕಾಸು ಸಚಿವರು ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಆರಂಭಿಸಲು ಘೋಷಿಸಿದ್ದಾರೆ.

ಮೊದಲಿನ ಕಾಲದಲ್ಲಿ ಮಹಿಳೆಯರು ತಮ್ಮ ಉಳಿತಾಯದ ಹಣವನ್ನು ಯಾವುದರರೂ ಅಕ್ಕಿ ಡಬ್ಬದಲ್ಲಿ, ಸಾಮಾನು ಡಬ್ಬದಲ್ಲಿ ಹಾಕಿ ಬಚ್ಚಿಡುತ್ತಿದ್ದಳು. ಆದರೆ ಅದಕ್ಕೆ ಯಾವುದೇ ಬಡ್ಡಿ ದೊರೆಯುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಸರಕಾರವು ಮಹಿಳೆಯರಿಗಾಗಿ ಹೊಸ ಹೋಜನೆಗಳನ್ನು ತರುತ್ತಿದೆ. ಹೌದು ಸ್ನೇಹಿತರೆ ಈ ವರ್ಷದ ಬಜೆಟ್ ನಲ್ಲಿ ಹಣಕಾಸು ಸಚಿವರು ಮಹಿಳೆಯರಿಗಾಗಿ ಹೊಸತೊಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅದೇ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ.

Sukanya Samriddhi Yojana In Kannada | ಸುಕನ್ಯಾ ಸಮೃದ್ಧಿ ಯೋಜನೆ

ಇದರಲ್ಲಿ ಮಹಿಳೆಯರು 2 ಲಕ್ಷ ಉಳಿತಾಯ ಮಾಡಬಹುದು, ಜೊತೆಗೆ ಅದರ ಮೇಲೆ ಶೇ.7.5 ಬಡ್ಡಿ ಸಿಗಲಿದೆ ಎಂದು ಹೇಳಿದ್ದಾರೆ. ಈ ಯೋಜನೆಯಡಿ ಮಹಿಳೆ ಅಥವಾ ಹುಡುಗಿಯ ಹೆಸರಿನಲ್ಲಿ 2 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಇದರ ಮೇಲೆ ವಾರ್ಷಿಕ ಶೇ.7.5 ಬಡ್ಡಿಯನ್ನು ಪಡೆಯಬಹುದು. ಈ ಯೋಜನೆಯು ಮಾರ್ಚ್ 2025 ರವರೆಗೆ ಅನ್ವಯಿಸಲಿದೆ ಎಂದು ಹೇಳಿದ್ದಾರೆ.

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಇಂದೇ ಅರ್ಜಿ ಸಲ್ಲಿಸಿ

ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ಮಾರ್ಚ್ 2025 ರವರೆಗೆ ಎರಡು ವರ್ಷಗಳ ಅವಧಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಈ ಯೋಜನೆಯು ರೂ 2 ಲಕ್ಷದವರೆಗೆ ಮಹಿಳೆಯರು ಅಥವಾ ಹುಡುಗಿಯರಿಗಾಗಿ 7.5% ಸ್ಥಿರ ಬಡ್ಡಿ ದರದಲ್ಲಿ 2 ವರ್ಷಗಳ ಅವಧಿಗೆ ಡಿಪಾಸಿಟ್ ಸೌಲಭ್ಯವನ್ನು ಒದಗಿಸುತ್ತದೆಯಂತೆ.

ಇದರಿಂದ ಮಹಿಳೆಯರು ಹೂಡಿಕೆಯನ್ನು ಮಾಡಬಹುದು ಹಾಗು ಸ್ವಾವಲಂಬಿಗಳು ಸಹ ಆಗಬಹುದು. ಈತರಹದ ಯೋಜನೆಗಳಿಂದ ಮಹಿಳೆಯರಲ್ಲಿ ಹೂಡಿಕೆ ಮಾಡುವ ಮನೋಭಾವನೆ ಹೆಚ್ಚುತ್ತದೆ.

 

Prachi

NCERT-NOTES Class 6 to 12.

Related Articles

Leave a Reply

Your email address will not be published. Required fields are marked *

Back to top button