ಪಾನ್ ಜೊತೆ ಆಧಾರ್ ಲಿಂಕ್ ಆಗದಿದ್ದರೆ ಪಾನ್ ನಿಷ್ಕ್ರೀಯ: ಎಚ್ಚರಿಕೆ
ಇಂದೇ ಪಾನ್ ಮತ್ತು ಆಧಾರ್ ಲಿಂಕ್ ಮಾಡಿ ಇಲ್ಲದಿದ್ದಲ್ಲಿ ನಿಮ್ಮ ಪಾನ್ ಕಾರ್ಡ್ ನಿಷ್ಕ್ರೀಯ ಮಾಡಲಾಗುತ್ತದೆ
ನಮ್ಮ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಈಗ ಖಡ್ಡಾಯವಾಗಿದೆ. ಹಾಗಾಗಿ ಐಟಿ ಇಲಾಖೆ ಪಾನ್ ಜೊತೆ ಆಧಾರ್ ಲಿಂಕ್ ಆಗದಿದ್ದರೆ ಪಾನ್ ನಿಷ್ಕ್ರಿಯವಾಗುವುದೆಂದು ಎಚ್ಚರಿಕೆಯನ್ನು ಸಹ ನೀಡಿದೆ. ಪಾನ್ ಜತೆ ಆಧಾರ್ ಲಿಂಕ್ ಮಾಡಲು ಸಾರ್ವಜನಿಕರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ.
2023ರ ಮಾರ್ಚ್ 31ರೊಳಗೆ ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಪಾನ್ ಲಿಂಕ್ ಮಾಡಿಕೊಳ್ಳಲು ಆದಾಯ ತೆರಿಗೆ ಇಲಾಖೆ ಕಟ್ಟುನಿಟ್ಟಾಗಿ ಸೂಚಿಸಿದೆ. ಐಟಿ (ಆದಾಯ ತೆರಿಗೆ ಇಲಾಖೆ) ಕಾಯ್ದೆ 1961ರ ಅನ್ವಯ ಆಧಾರ್ ಜೊತೆಗೆ ಪಾನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಸರ್ಕಾರವು ಹಲವು ಬಾರಿ ಅವಕಾಶ ನೀಡಿದರೂ ಸಹ ಇನ್ನೂ ಹೆಚ್ಚಿನ ಜನರು ಆಧಾರ್ ಜೊತೆಗೆ ಪಾನ್ ಲಿಂಕ್ ಮಾಡಿಕೊಂಡಿಲ್ಲ. ಆದ್ದರಿಂದ ಇದೀಗ ಮತ್ತೊಮ್ಮೆ ಆದಾಯ ತೆರಿಗೆ ಇಲಾಖೆ ಗಡುವು ವಿಸ್ತರಿಸಿ ಪಾನ್ ಜತೆ ಆಧಾರ್ ಲಿಂಕ್ ಮಾಡಲು ಮಹತ್ವದ ಸೂಚನೆ ನೀಡಿದೆ.
ಮನೆಯಲ್ಲೇ ಕುಳಿತು ABHA ಆಯುಷ್ಮಾನ್ ಕಾರ್ಡ್ ಹೇಗೆ ಮಾಡುದು?
ಒಂದುವೇಳೆ ನೀವು 2023ರ ಮಾರ್ಚ್ 31ರ ಒಳಗೆ ಪಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ ಏಪ್ರಿಲ್ 1ರಿಂದ ನಿಮ್ಮ ಪಾನ್ ಕಾರ್ಡ್ ನಿಷ್ಕ್ರೀಯಗೊಳ್ಳಲಿದೆ. ಪಾನ್ ಕಾರ್ಡ್ ನಮಗೆಲ್ಲ ಎಷ್ಟು ಮುಖ್ಯವೆಂದರೆ ಯಾವುದೇ ಹಣದ ವ್ಯವಹಾರವನ್ನು ಮಾಡಬೇಕಾದರೆ ಪಾನ್ ಕಾರ್ಡ್ ಇರಲೇಬೇಕು. ಪಾನ್ ಕಾರ್ಡ್ ಇಲ್ಲದೆ ಬ್ಯಾಂಕ್ಗಳಲ್ಲಿ ಯಾವುದೇ ವಹಿವಾಟು ಸಾಧ್ಯವಿಲ್ಲ ಎಂಬುದು ನಮಗೆಲ್ಲ ತಿಳಿದೇ ಇದೆ. ಹಾಗಾಗಿ ಹಣಕಾಸಿನ ನಿರ್ವಹಣೆ ಕಾರ್ಯಗಳಿಗೆ ತೊಂದರೆಯಾಗದಂತೆ ತಡೆಯಲು ನೀವು ನಿಮ್ಮ ಪಾನ್ ಮತ್ತು ಆಧಾರ್ ಕಾರ್ಡನ್ನು ಆದಷ್ಟು ಬೇಗ ಲಿಂಕ್ ಮಾಡಿ ಕೊಳ್ಳಿ.
ಶೀಘ್ರದಲ್ಲಿ ರೈತರ ಖಾತೆಗೆ ಮುಂಗಾರಿ ಹಂಗಾಮಿನ ಮಧ್ಯಂತರ ಬೆಳೆ ವಿಮೆ ಬಿಡುಗಡೆ
ಇದನ್ನು ನೀವೇ ನಿಮ್ಮ ಮೊಬೈಲ್ ಮೂಲಕ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಆದಾಯ ತೆರಿಗೆ ಇಲಾಖೆ ಅಧಿಕೃತ ಜಾಲತಾಣವಾಗಿರುವ (ಇಪೋರ್ಟಲ್)ಈ www.eportal.incometax.gov.in ವೆಬ್‌ಸೈಟ್ ಭೇಟಿ ನೀಡಿ. ಅಲ್ಲಿ ತಿಳಿಸಿರುವ ಪ್ರಕಾರ ನಿಮ್ಮ ಆಧಾರ್ ಕಾರ್ಡ್ ಹಾಗೂ ಪಾನ್ ನಂಬರ್ ನಮೂದಿಸಿ ಅಲ್ಲಿನ ಪ್ರಕ್ರಿಯೆ ಪೂರ್ಣಗೊಳಿಸಿ ಪಾನ್ ಮತ್ತು ಆಧಾರ್ ಕಾರ್ಡನ್ನು ಲಿಂಕ್ ಮಾಡಿ.