Namapada In Kannada | Kannada Namapada | ನಾಮಪದಗಳು
Namapada In Kannada, Kannada Namapada, ನಾಮಪದಗಳು, Types of namapada in kannada, Namapada endarenu in kannada definition,
Nama padagalu in kannada, Anvartha nama examples in kannada, Namapada endarenu, Nama padagalu
ನಾಮಪದ ಎಂದರೇನು?
ಯಾವುದೇ ವಸ್ತು, ವ್ಯಕ್ತಿ, ಸ್ಥಳ, ಪ್ರಾಣಿಗಳ ಹೆಸರನ್ನು ಸೂಚಿಸುವುದು ನಾಮಪದ.
ನಾಮಪ್ರಕೃತಿ ಎಂದರೇನು?
ನಾಮಪದಗಳ ಮೂಲ ರೂಪವನ್ನು ನಾಮಪ್ರಕೃತಿ ಎನ್ನುತ್ತಾರೆ.
ಉದಾಹರಣೆಗೆ ಶ್ಯಾಮನು ಬಂದನು. ಇದರಲ್ಲಿ ಶ್ಯಾಮ ನಾಮಪ್ರಕೃತಿಯಾಗುತ್ತದೆ.
ಈ ನಾಮಪದದಲ್ಲಿ 9 ವಿಧಗಳಿವೆ. ಅವುಗಳು ಈ ಕೆಳಗಿನಂತಿವೆ.
೧. ವಸ್ತುವಾಚಕ
೨. ಗುಣವಾಚಕ
೩. ಸಂಖ್ಯಾವಾಚಕ
೪. ಸಂಖ್ಯೇಯವಾಚಕ
೫. ಭಾವನಾಮ
೬. ಪರಿಮಾಣವಾಚಕ
೭. ಪ್ರಕರವಾಚಕ
೮. ದಿಕ್ವಾಚಕ
೯. ಸರ್ವನಾಮ
1. ವಸ್ತುವಾಚಕ :
ಯಾವುದೇ ವಸ್ತು, ವ್ಯಕ್ತಿ, ಸ್ಥಳ, ಪ್ರಾಣಿಗಳ ಹೆಸರನ್ನು ಸೂಚಿಸುವುದು ಅಥವಾ ವಸ್ತುವಾಚಕ.
ಇವುಗಳಲ್ಲಿ ೩ ವಿಧಗಳಿವೆ.
a. ರೂಢನಾಮ
b. ಅಂಕಿತನಾಮ
c. ಅನ್ವರ್ಥನಾಮ
a. ರೂಢನಾಮ :
ಅನಾದಿಕಾಲದಿಂದ ರೂಡಿಯಲ್ಲಿ ಬಂಡ ಶಬ್ದಗಳು.
ಉದಾ: ಜನರು, ನದಿ, ಬೆಟ್ಟ.
b. ಅಂಕಿತ ನಾಮ:
ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡಿರುವ ಹೆಸರು.
ಉದಾ: ಶ್ಯಾಮ, ನಂದಿಬೆಟ್ಟ, ಕಬ್ಬನ್ಪಾರ್ಕ್, ಗೇರುಮರ
c. ಅನ್ವರ್ಥನಾಮ:
ವ್ಯಕ್ತಿಯ ವ್ಯಕ್ತಿತ್ವ, ಅಂಗವೈಕಲ್ಯತೆ, ವೃತ್ತಿಯ ಆಧಾರದ ಮೇಲೆ ಗುರುತಿಸುವುದು.
ಉದಾ: ಜಾಣ, ಕಿವುಡ, ವೈದ್ಯ
2. ಗುಣವಾಚಕ :
ವ್ಯಕ್ತಿ ಅಥವಾ ವ್ಯಕ್ತಿಗಳ ಗುಣ ಸ್ವಭಾವಗಳನ್ನು ತಿಳಿಸುವ ವಿಶೇಷಣಗಳು. ಉದಾಹರಣೆಗೆ ಸಿಹಿ, ಕಹಿ, ದೊಡ್ಡದು, ಚಿಕ್ಕದು, ಎತ್ತರ
3. ಸಂಖ್ಯಾವಾಚಕ:
ಸಂಖ್ಯೆಯನ್ನು ಸೂಚಿಸುವ ಶಬ್ದಗಳು.
ಉದಾಹರಣೆಗೆ: ಒಂದು, ಎರಡು, ಹತ್ತು, ನೂರು, ಸಾವಿರ, ಲಕ್ಷ, ಕೋಟಿ ಇತ್ಯಾದಿ
4. ಸಂಖ್ಯೇಯವಾಚಕ :
ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಸೂಚಿಸುವ ಶಬ್ದಗಳು.
ಉದಾಹರಣೆಗೆ ಇಬ್ಬರೂ ಎರಡನೆಯ ಮೂವರು ಮೂರರಿಂದ ನಾಲ್ಕರಿಂದ
5. ಭಾವನಾಮ:
ವಸ್ತುಗಳು ಮತ್ತು ಕ್ರಿಯೆಯ ಭಾವಗಳನ್ನು ತಿಳಿಸುವ ಶಬ್ದಗಳನ್ನು ಭಾವನಾಮ ಎಂದು ಕರೆಯುತ್ತೇವೆ.
ಉದಾಹರಣೆಗೆ ಬಿಳುಪು ಆಟ ನೋಟ ಇತ್ಯಾದಿ
6. ಪರಿಮಾಣವಾಚಕ :
ವಸ್ತುಗಳ ಸಾಮಾನ್ಯ ಅಳತೆ ಪರಿಮಾಣ ಗಾತ್ರ ಇತ್ಯಾದಿಗಳು.
ಉದಾಹರಣೆಗೆ ಹಲವು, ಕೆಲವು, ಅಷ್ಟು, ಇಷ್ಟು
7. ಪ್ರಕಾರವಾಚಕ:
ವಸ್ತುಗಳ ಸ್ಥಿತಿ ಅಥವಾ ರೀತಿಯನ್ನು ತಿಳಿಸುವ ಶಬ್ದ.
ಉದಾಹರಣೆಗೆ ಅಂತಹ, ಇಂತಹ, ಎಂತಹ ಇತ್ಯಾದಿ
8. ದಿಕ್ವಾಚಕ :
ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳನ್ನು ದಿಕ್ವಾಚಕಗಳು ಎನ್ನುತ್ತಾರೆ.
ಉದಾಹರಣೆಗೆ ಉತ್ತರ ದಕ್ಷಿಣ ಪಚ್ಚಿಮ ಈಶಾನ್ಯ ನೈಋತ್ಯ ಇತ್ಯಾದಿ. ಆಡುಭಾಷೆಯಲ್ಲಿ ಹೇಳೋದಾದರೆ ಹಿಂದೆ ಮುಂದೆ ಆಕಡೆ ಈಕಡೆ ಎಂದು ಹೇಳಬಹುದು.
9. ಸರ್ವನಾಮ:
ನಾಮಪದದ ಬದಲಿಗೆ ಬಳಸುವ ಪದಗಳಿಗೆ ಸರ್ವನಾಮ ಎಂದು ಕರೆಯುತ್ತಾರೆ.
ಉದಾಹರಣೆಗೆ ಅದು-ಇದು ಅವಳು ಅವನು ಇವಳು.
ಸರ್ವನಾಮ ದಲ್ಲಿ ಮೂರು ವಿಧಗಳಿವೆ: ಅವುಗಳು
A. ಪುರುಷಾರ್ಥಕ
B. ಆತ್ಮಾರ್ಥಕ
C. ಪ್ರಶ್ನಾರ್ಥಕ
A. ಪುರುಷಾರ್ಥಕ ದಲ್ಲಿ ಮೂರು ವಿಧಗಳಿವೆ:
a. ಉತ್ತಮ ಪುರುಷ
b. ಮಧ್ಯಮ ಪುರುಷ
c. ಪ್ರಥಮ ಪುರುಷ
a. ಉತ್ತಮ ಪುರುಷ ಎಂದರೆ ತನ್ನನ್ನು ತಾನು ಉದ್ದೇಶಿಸಿ ಕೊಳ್ಳುವುದು ನಿರ್ದೇಶಿಸಿ ಕೊಳ್ಳುವುದು.
ಉದಾಹರಣೆಗೆ ನಾನು ನಾವು.
b. ಮಧ್ಯಮ ಪುರುಷ ಎಂದರೆ ಮಾತನಾಡುವವನು ತನ್ನ ಮುಂದಿರುವ ವ್ಯಕ್ತಿಯನ್ನು ನಿರ್ದೇಶಿಸುವುದು.
ಉದಾಹರಣೆಗೆ :ನೀನು, ನೀವು.
c. ಪ್ರಥಮ ಪುರುಷ ಎಂದರೆ ಮಾತನಾಡುವವನಿಂದ ದೂರವಿರುವ ವ್ಯಕ್ತಿಯನ್ನು ನಿರ್ದೇಶಿಸುವುದು.
ಉದಾಹರಣೆಗೆ : ಅವನು, ಅವರು, ಅದು.
B. ಆತ್ಮಾರ್ಥಕ ಸರ್ವನಾಮ ಎಂದರೆ ಮಾತನಾಡುವವನು ತನ್ನನ್ನು ಹಾಗೂ ಇತರರನ್ನು ಗೌರವಸೂಚಕವಾಗಿ ಬಳಸುವ ಸರ್ವನಾಮ.
ಉದಾಹರಣೆಗೆ- ತಾನು ತಾವು ತನ್ನ ಇತ್ಯಾದಿ.
C. ಪ್ರಶ್ನಾರ್ಥಕ ಸರ್ವನಾಮ ಎಂದರೆ ಪ್ರಶ್ನೆಗಳಿಂದ ಕೂಡಿದ ಎಲ್ಲ ಸರ್ವನಾಮ ಪದಗಳು.
ಉದಾಹರಣೆಗೆ ಏಕೆ ಏನು ಎಲ್ಲಿ ಯಾವಾಗ ಇತ್ಯಾದಿ.