Kannada

ಮ್ಯಾಂಡಸ್ ಚಂಡಮಾರುತದಿಂದಾಗಿ ಈ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಮ್ಯಾಂಡಸ್ ಚಂಡಮಾರುತ (Mandouse Cyclone)

ಮ್ಯಾಂಡಸ್ ಚಂಡಮಾರುತದಿಂದಾಗಿ ಬಂಗಾಳಕೊಲ್ಲಿ ವಾಯುಭಾರಕುಸಿತದಿಂದಾಗಿ ಹಲವು ಜಿಲ್ಲೆಗಳಲ್ಲಿ ಚಳಿ ಹಾಗು ಮಳೆ ಆಗಲಿದೆ. ಮ್ಯಾಂಡಸ್ ಚಂಡಮಾರುತ ಯಾವತಾರ ಪ್ರಭಾವ ಬೀರಿದೆ ಎಂದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶೀತ ಗಾಳಿ,ಮಳೆ ಹಾಗು ತಾಪಮಾನದಲ್ಲಿ ವೈಪರೀತ್ಯ ಉಂಟಾಗಿದೆ. ಇದರಿಂದ ಮುನ್ನೆಚ್ಚರಿಕೆಯ ಸಲುವಾಗಿ ರಾಜ್ಯದ 5 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

Join Our WhatsApp Group Here:

ಯಾವ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ?

ಬೆಂಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ, ಕೊಡಗು ಮತ್ತು ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಹಿನ್ನಲೆಯಲ್ಲಿ ಅಲರ್ಟ್ ಘೋಷಿಸಲಾಗಿದೆ.

ಮುಂದಿನ ವಾರದಲ್ಲಿ ಸಹ ಮತ್ತೊಂದು ಚಂಡಮಾರುತ ಬಂಗಾಳ ಕೊಲ್ಲಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಆರೋಗ್ಯ ಇಲಾಖೆಯು ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆಯನ್ನು ನೀಡಿದೆ. ಈ ಅತಿಯಾದ ಶೀತದ ವಾತಾವರಣದಲ್ಲಿ ನಾಗರಿಕರು, ಮಕ್ಕಳು, ವೃದ್ಧರು, ಗರ್ಭಿಣಿಯರು ,ಬಾಣಂತಿಯರು ಎಲ್ಲರೂ ಸಹ ಕೆಲವು ಸಲಹೆಗಳನ್ನು ಪಾಲಿಸಬೇಕು ಎಂದು ಆಯುಕ್ತ ರಂದೀಪ್ ಡಿ. ಕೆಲವು ಸಲಹೆಗಳನ್ನು ನೀಡಿದ್ದಾರೆ .

 ರೈತರ ಖಾತೆಗೆ ಬೆಳೆ ವಿಮೆ ಬಿಡುಗಡೆ (Crop Insurance)

ಆ ಸಲಹೆಗಳು ಈ ಕೆಳಗಿನಂತಿವೆ:

1. ಯಾವಾಗಲೂ ಬಿಸಿಯಾಗಿರುವ ನೀರು ಮತ್ತು ಸೂಪ್ಗಳನ್ನು ಕುಡಿಯಿರಿ.

2. ಬೇಗನೆ ಜೀರ್ಣವಾಗುವ ಮತ್ತು ತಾಜಾ ಆಹಾರವನ್ನು ಸೇವಿಸಿ.

3. ಯಾವಾಗಲು ಸ್ವೆಟರ್, ಸಾಕ್ಸ್ ಗಳನ್ನು ಧರಿಸಿ. ಅನಗತ್ಯ ಸಂಚರಿಸುವುದನ್ನು ತಪ್ಪಿಸಿ.

4. ಕಿವಿಗೆ ಗಾಳಿಹೋಗದಂತೆ ಹತ್ತಿಯನ್ನು ಬಳಸಿ ಅಥವಾ ಸ್ಕಾರ್ಫ್ ಅನ್ನು ಧರಿಸಿ.

5. ಕೆಮ್ಮು ಶೀತ ಜ್ವರ ಇರುವವರಿಂದ ದೂರವಿರಿ.

6. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ ಬಳಸಿ.

7. ಜ್ವರ ಕಂಡುಬಂದಲ್ಲಿ ವೈದ್ಯರ ಸಲಹೆಯನ್ನು ಪಡೆಯಿರಿ.

8. ತಣ್ಣನೆಯ ನೀರನ್ನು ಕುಡಿಯಬೇಡಿ.

9. ಜ್ಯೂಸ್ ಮತ್ತು ಐಸ್ ಕ್ರೀಮ್ ಅನ್ನು ಸೇವಿಸಬೇಡಿ.

10. ಜಂಕ್ ಫುಡ್ ಗಳನ್ನು ಸೇವಿಸಬೇಡಿ.

11. ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಿ.

12. ಈ ಹೊತ್ತಲ್ಲಿ ಪ್ರವಾಸವನ್ನು ಕೈಗೊಳ್ಳುವುದನ್ನು ತಪ್ಪಿಸಿ

Join Our WhatsApp Group Here:

 

Prachi

NCERT-NOTES Class 6 to 12.

Related Articles

Back to top button