Kannada

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಇಂದೇ ಅರ್ಜಿ ಸಲ್ಲಿಸಿ

ಭಾರತ ಸರ್ಕಾರವು ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ತರುತ್ತಿದೆ. ಅದರ ಭಾಗವಾಗಿ ಕೇಂದ್ರ ಸರ್ಕಾರವು ಎಲ್ಲಾ ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸಾಲು ನಿರ್ಧರಿಸಿದೆ. ಈ ಯೋಜನೆಯು ಭಾರತದಾದ್ಯಂತ, ಭಾರತದ ಪ್ರತಿಯೊಂದು ರಾಜ್ಯಕ್ಕೂ ಅನ್ವಯಿಸುತ್ತದೆ. ಕರ್ನಾಟಕ ಉಚಿತ ಹೊಲಿಗೆ ಯಂತ್ರ ಯೋಜನೆ 2023ರ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲೇಖನವನ್ನು ಪೂರ್ತಿಯಾಗಿ ಓದಿ.

ಮಹಿಳೆ ಯರನ್ನು ಸಬಲಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವಾರು ಯೋಜನೆ ಗಳನ್ನು ಜಾರಿಗೆ ತರುತ್ತಿದೆ. ಈ ಸರಳ ಯೋಜನೆಗಳು ಶೂನ್ಯ ಬಂಡವಾಳದಲ್ಲಿ ಅಥವಾ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದು.

ಹಾಗಾಗಿ ಇದರಿಂದ ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಅಂಥಾ ಯೋಜನೆಯಲ್ಲೊಂದು ಉಚಿತ ಹೊಲಿಗೆ ಯಂತ್ರ ಯೋಜನೆ ಒಂದಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕರ್ನಾಟಕ ಸರ್ಕಾರವು ಸಹ ಈ ಯೋಜನೆಯನ್ನು ಮಹಿಳೆಯರಿಗೆ ನೀಡುತ್ತಿದೆ.

ಕರ್ನಾಟಕ ಉಚಿತ ಹೊಲಿಗೆ ಯಂತ್ರ 2023 (Karnataka Free Sewing Machine Scheme)

ಉಚಿತ ಹೊಲಿಗೆ ಯಂತ್ರ ಪಡೆಯಲು ಯಾವ ಅರ್ಹತೆಗಳು ಬೇಕು?

ಟೈಲರಿಂಗ್‌ನಲ್ಲಿ ಪ್ರತಿಭೆಯನ್ನ ಹೊಂದಿರುವ, ಕರ್ನಾಟಕದ ಖಾಯಂ ಪ್ರಜೆಯಾಗಿರುವ ಮಹಿಳೆಯರು ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ಆ ಅಭ್ಯರ್ಥಿಯು ಬಡತನ ರೇಖೆಗಿಂತ ಕೆಳಗಿರಬೇಕು. ಮಹಿಳೆಯರ ಕನಿಷ್ಠ ವಯಸ್ಸು 20 ಮತ್ತು ಗರಿಷ್ಠ ವಯಸ್ಸು 49 ಇದ್ದು ಕುಟುಂಬದ ಆದಾಯವು 12,000 ರೂಪಾಯಿಕ್ಕಿಂತ ಕಡಿಮೆ ಇರಬೇಕು. ಈ ಎಲ್ಲ ಅರ್ಹತಾ ಮಾನದಂಡಗಳ ಅಡಿಯಲ್ಲಿ ಬರುವ ಮಹಿಳೆಯರು ಮಾತ್ರ ಉಚಿತ ಹೊಲಿಗೆ ಯಂತ್ರ ಯೋಜನೆಯ ಪ್ರಯೋಜನ ಪಡೆಯಬಹುದು.

Free Sewing Machine Scheme In Karnataka 2023

ಅರ್ಜಿಯನ್ನು ಹೇಗೆ ಸಲ್ಲಿಸುವುದು ?

ಮೊದಲು ಯೋಜನೆಯ ಅಧಿಕೃತ ವೆಬ್‌ಸೈಟ್‌ National Portal of India ಗೆ ಭೇಟಿ ಕೊಡಿ. ಅದರಲ್ಲಿ https://www.india.gov.in/ ಪುಟವನ್ನು ತೆರೆಯಿರಿ. ಅಲ್ಲಿ ಉಚಿತ ಹೊಲಿಗೆ ಯಂತ್ರ ಯೋಜನೆ ಕರ್ನಾಟಕದ ಲಿಂಕ್ ಆನ್ ಲೈನ್ ಅರ್ಜಿ ನಮೂನೆ ಇರುತ್ತದೆ, ಆ ಲಿಂಕ್ಅನ್ನು ಕ್ಲಿಕ್ ಮಾಡಿ. ಅದರ ನಂತರ ಅರ್ಜಿ ನಮೂನೆ ಓಪನ್ ಆಗುತ್ತದೆ. ಅರ್ಜಿ ನಮೂನೆಯ ಕೆಳಗಿರುವ ಡೌನ್ ಲೋಡ್ ಲಿಂಕ್ ಅನ್ನು ಕ್ಲಿಕ್ ಮಾಡಿ.

Sukanya Samriddhi Yojana In Kannada | ಸುಕನ್ಯಾ ಸಮೃದ್ಧಿ ಯೋಜನೆ

ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಎಲ್ಲಾ ಫಾರ್ಮ್‌ಗಳನ್ನು ಭರ್ತಿ ಮಾಡಿ. ಅದರಲ್ಲಿ ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ವಿಳಾಸ, ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಯಂತಹ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ನಮೂದಿಸಬೇಕು. ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿದ ನಂತರ ಎಲ್ಲಾ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ.

Prachi

NCERT-NOTES Class 6 to 12.

Related Articles

Back to top button