Jobs

10ನೇ ತರಗತಿ ಪಾಸಾದವರಿಗೆ DCC Bank ನಲ್ಲಿ ಉದ್ಯೋಗಾವಕಾಶ | DCC Bank Recruitment 2023

ಹಲೋ ಸ್ನೇಹಿತರೆ 10ನೇ ತರಗತಿ ಪಾಸಾದವರಿಗೆ ನಲ್ಲಿ ಡಿ ಸಿ ಸಿ ಬ್ಯಾಂಕ್ನಲ್ಲಿ 52 ಸಾವಿರ ರೂ. ವೇತನದ ಉದ್ಯೋಗಾವಕಾಶವಿದೆ.

Bangalore DCC Bank Recruitment 2023: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನ ಅಧಿಕೃತ ವೆಬ್​ಸೈಟ್​ bengalurudccbank.com ಗೆ ಭೇಟಿ ನೀಡಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಈ ಲೇಖನವನ್ನು ಓದಿ.

Bangalore DCC Bank Recruitment 2023: ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನ (BDCCB) ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸ್ಟೆನೋಗ್ರಾಫರ್, ಕಂಪ್ಯೂಟರ್ ಆಪರೇಟರ್, ಡ್ರೈವರ್, ಜೆಎ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನ ಅಧಿಕೃತ ವೆಬ್​ಸೈಟ್​ bengalurudccbank.com ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇದನ್ನು ಓದಿ.

ಹುದ್ದೆಗಳ ವಿವರಗಳು ಈ ಕೆಳಗಿನಂತಿವೆ :

ಬ್ರಾಂಚ್ ಮ್ಯಾನೇಜರ್ ಹುದ್ದೆ – 4
ಹಿರಿಯ ಸಹಾಯಕ ಹುದ್ದೆ- 19
ಸ್ಟೆನೋಗ್ರಾಫರ್ಸ್ ಹುದ್ದೆ- 1
ಕಿರಿಯ ಸಹಾಯಕರು ಹುದ್ದೆ- 43
ಕಂಪ್ಯೂಟರ್ ಆಪರೇಟರ್ ಹುದ್ದೆ- 2
ಚಾಲಕ ಹುದ್ದೆ- 4
ಗ್ರೂಪ್ ಡಿ ಹುದ್ದೆ – 23
ಒಟ್ಟು ಹುದ್ದೆಗಳ ಸಂಖ್ಯೆ- 96

ಅರ್ಹತಾ ಮಾನದಂಡಗಳು ಹೀಗಿವೆ :

ಬ್ರಾಂಚ್ ಮ್ಯಾನೇಜರ್, ಹಿರಿಯ ಸಹಾಯಕ ಹುದ್ದೆಗೆ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸ್ಟೆನೋಗ್ರಾಫರ್ಸ್ ಹುದ್ದೆಗೆ ಪಿಯುಸಿ, ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್​ನ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕಿರಿಯ ಸಹಾಯಕ ಹುದ್ದೆಗೆ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು.
ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಪಿಯುಸಿ, ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್​ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಚಾಲಕ, ಗುಂಪು ಡಿ ಹುದ್ದೆಗೆ ಎಸ್.ಎಸ್.ಎಲ್.ಸಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ ಈ ಕೆಳಗಿನಂತಿದೆ :

ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಮೇಲಿನ ಹುದ್ದೆಗಳಿಗೆ ಕನಿಷ್ಠ 18 ರಿಂದ ಗರಿಷ್ಠ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗಿದೆ. ಹಾಗೆಯೆ SC/ST ಅಭ್ಯರ್ಥಿಗಳಿಗೆ 5 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ (Application Fee):

ಸಾಮಾನ್ಯ(ಜನರಲ್), 2A, 2B, 3A, 3B ಅಭ್ಯರ್ಥಿಗಳಿಗೆ ರೂ.1500/- ಹಾಗೂ SC/ST ಅಭ್ಯರ್ಥಿಗಳಿಗೆ ರೂ.750/- ಅರ್ಜಿ ಶುಲ್ಕವಿದೆ.

ಆಯ್ಕೆ ಪ್ರಕ್ರಿಯೆ (ಸೆಲೆಕ್ಷನ್ ಪ್ರೋಸೆಸ್):

ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ನಿಗದಿತ ಅರ್ಹತಾ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ತೇರ್ಗಡೆ ಗೊಂಡವರನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Sukanya Samriddhi Yojana In Kannada | ಸುಕನ್ಯಾ ಸಮೃದ್ಧಿ ಯೋಜನೆ

ವೇತನ (salary) ಈ ಕೆಳಗಿನಂತಿದೆ:

ಬ್ರಾಂಚ್ ಮ್ಯಾನೇಜರ್ ಹುದ್ದೆಗೆ – ರೂ. 40900 ರಿಂದ 78200/-
ಹಿರಿಯ ಸಹಾಯಕ ಹುದ್ದೆಗೆ – ರೂ. 37900 ರಿಂದ 70850/-
ಸ್ಟೆನೋಗ್ರಾಫರ್ಸ್ ಹುದ್ದೆಗೆ – ರೂ. 37900 ರಿಂದ 70850/-
ಕಂಪ್ಯೂಟರ್ ಆಪರೇಟರ್ ಹುದ್ದೆಗೆ – ರೂ.30350 ರಿಂದ 58250/-
ಹಿರಿಯ ಸಹಾಯಕರು ಹುದ್ದೆಗೆ – ರೂ.30350 ರಿಂದ 58250/-
ಚಾಲಕ ಹುದ್ದೆಗೆ – ರೂ. 27650 ರಿಂದ 52650/-
ಗುಂಪು ಡಿ ಹುದ್ದೆಗೆ – ರೂ. 23500 ರಿಂದ 47650/-

ಪ್ರಮುಖ ದಿನಾಂಕಗಳು :

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಫೆಬ್ರವರಿ 28, 2023 ಕೊನೆಯ ದಿನಾಂಕ.

ಅರ್ಜಿ ಹೀಗೆ ಸಲ್ಲಿಸಿ:

ಈ ಮೇಲಿನ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಈ ಪಿಡಿಎಫ್ ಫೈಲ್ ಅನ್ನು ಕ್ಲಿಕ್ ಮಾಡಿ.

 

 

 

Prachi

NCERT-NOTES Class 6 to 12.
Back to top button