ರೈತರಿಗೊಂದು ಸಿಹಿ ಸುದ್ದಿಇನ್ನು ನಿಮಗೆ ಸಾಲಕ್ಕೆ ಅಲ್ಲಿ ಇಲ್ಲಿ ಓಡಾಡಬೇಕಿಲ್ಲ ಅಂಚೆಕಚೇರಿಯಲ್ಲೇ ಸಾಲ, ಅಲ್ಲೇ ಮರುಪಾವತಿ
ಭಾರತದ ಗ್ರಾಮೀಣ ಜನರ ಸಲುವಾಗಿ ಈಗ ರೈತರಿಗೆ ಅಂಚೆ ಇಲಾಖೆ ತುಂಬಾ ಸಹಾಯಕಾರಿ ಯೋಜನೆಯೊಂದನ್ನು ರೂಪಿಸಿದೆ. ಇನ್ನು ಮುಂದೆ ರೈತರು ತಮಗೆ ಬೇಕಾದ ವಿವಿಧ ಸಾಲವನ್ನು ಅಂಚೆಕಚೇರಿಯಲ್ಲೇ ಪಡೆಯಬಹುದು. ಇದರ ಜೊತೆಗೆ ಇಎಂಐ ಅನ್ನು ಸಹ ಇಲ್ಲೇ ಪಾವತಿಸಬಹುದು.
ಹೌದು ನಮ್ಮ ಕರ್ನಾಟಕದ ಅಂಚೆ ಇಲಾಖೆಯು ಇಂತಹ ಹೊಸ ಯೋಜನೆಯನ್ನು ರೂಪಿಸಿದೆ. ಅಂಚೆ ಇಲಾಖೆಯು ಹೆಚ್‌ಡಿಎಫ್‌ಸಿ ಬ್ಯಾಂಕ್ ಜೊತೆ ಕೈ ಜೋಡಿಸಿ ರೈತರಿಗೆ ಸುಲಭವಾಗಿ ಸಾಲ ನೀಡಲು ಮುಂದಾಗಿದೆ. ಶೀಘ್ರದಲ್ಲೇ ರೈತರು ತಮ್ಮ ಗ್ರಾಮದಲ್ಲಿರುವ ಅಂಚೆ ಕಚೇರಿಯಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಸಾಲವನ್ನು ಪಡೆಯಬಹುದಾಗಿದೆ. ರೈತರು ಪಡೆದ ಸಾಲವನ್ನು ಕಂತುಗಳ ಮುಖಾಂತರ ಅಂಚೆ ಕಚೇರಿಯಲ್ಲೇ ಮರುಪಾವತಿಸಬಹುದು.
ಕರ್ನಾಟಕ ರಾಜ್ಯದಲ್ಲಿ ಈ ಸಲ ಸೌಲಭ್ಯ ಮೊದಲ ಪ್ರಯತ್ನವಾಗಿದೆ. ಅಂಚೆ ಇಲಾಖೆ ಗ್ರಾಮೀಣ ಮಟ್ಟದಲ್ಲಿ ಜನರಿಗೆ ಸುಲಭವಾಗಿ ಲಭ್ಯವಿರುವುದರಿಂದ ಎಲ್ಲ ರೈತರಿಗೂ ಅನುಕೂಲವಾಗಲಿದೆ. ಸ್ಲಕ್ಕಾಗಿ ರೈತರು ಎಲ್ಲೆಲ್ಲೋ ಅಲೆದಾಡುವುದನ್ನು ತಡೆಯಲು ಈ ಯೋಜನೆ ಸಹಾಯಕಾರಿಯಾಗಿದೆ. ಅಂಚೆ ಕಚೇರಿಯಲ್ಲಿ ರೈತರಿಗೆ ಬೇಕಾದ ಎಲ್ಲ ವಿವರಗಳನ್ನು ಸ್ಥಳೀಯ ಭಾಷೆಯಲ್ಲಿಯೇ ಪಡೆಯಬಹುದು.
Karnataka Ganga Kalyana Scheme 2023 | ಕರ್ನಾಟಕ ಗಂಗಾ ಕಲ್ಯಾಣ ಯೋಜನೆ 2023
ಅಂಚೆ ಇಲಾಖೆಯಾ ಸಿಪಿಎಂಜೆ ರಾಜೇಂದ್ರ ಎಸ್. ಕುಮಾರ್ ಅವರು ಈ ಕುರಿತು ಮಾತನಾಡಿದ್ದಾರೆ, ರೈತರಿಗೆ ಆರ್ಥಿಕ ನೆರವು ನೀಡಲು ಗ್ರಾಮೀಣ ಮಟ್ಟದಲ್ಲಿ ಬ್ಯಾಂಕ್ ಜೊತೆ ಅಂಚೆ ಇಲಾಖೆ ಸಹಕರಿಸಲಿದೆ. ಬ್ಯಾಂಕಿನ ಅರ್ಹತೆಗೆ ಕೆಲವು ಆಧಾರದ ಮೇಲೆ ಅಂಚೆ ಕಚೇರಿಯಲ್ಲಿಯೇ ರೈತರಿಗೆ ಸಾಲ ನೀಡಲಾಗುತ್ತದೆ. ಆದರೆ ಯಾರಿಗೆ ಎಷ್ಟು ಸಾಲ ನೀಡಬೇಕು ಎಂಬುದನ್ನು ಬ್ಯಾಂಕ್ ನಿರ್ಧಾರಮಾಡಲಿದೆ ನಿರ್ಧರಿಸಲಿದೆ ಎಂದು ಹೇಳಿದರು.
ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ರೈತರಿಗೆ ಹಲವಾರು ಬಗೆಯ ಸಾಲಗಳು ಲಭ್ಯವಿದೆ. ಉದಾಹರಣೆಗೆ ಪಶುಸಂಗೋಪನೆ ಸಾಲ, ತೋಟಗಾರಿಕೆ ಸಾಲ, ಕೃಷಿ ಸಾಲ, ಫೌಲ್ಟ್ರಿಂ ಫಾರಂ ಸಾಲ ಸೇರಿದಂತೆ ವಿವಿಧ ಸಾಲಗಳು ಲಭ್ಯವಿದೆ. ಆದರೆ ರೈತರಿಗೆ ಈ ಕುರಿತು ಸರಿಯಾದ ಮಾಹಿತಿ ಇರುವುದಿಲ್ಲ.
ಹಾಗಾಗಿ ಈ ಯೋಜನೆಯಿಂದ ರೈತರು ಸುಲಭವಾಗಿ ಎಲ್ಲತರಹದ ಮಾಹಿತಿಯನ್ನು ಪಡೆಯಬಹುದು.
ಈ ಯೋಜನೆಯಿಂದಾಗಿ ರೈತರು ನೇರವಾಗಿ ಅಂಚೆ ಕಚೇರಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಹಾಗು ಸಾಲವನ್ನು ಪಡೆಯಬಹುದು. ಇದರಲ್ಲಿ ಮಧ್ಯವರ್ತಿಗಳ ಕಾಟವಿರುವುದಿಲ್ಲ. ಮಧ್ಯವರ್ತಿಗಳ ಕಾಟದಿಂದ ರೈತರು ಹೆಚ್ಚಿನ ನಷ್ಟವನ್ನೇ ಅನುಭವಿಸುತ್ತಾರೆಯೇ ಹೊರತು ಲಾಭವನಲ್ಲ.