Kannada

ಯಾವುದೇ ಶುಲ್ಕವಿಲ್ಲದೆ ಇಂದೇ ಆನ್ಲೈನ್ ನಲ್ಲಿ ನಿಮ್ಮ ಆಧಾರ್ ಅಪ್ಡೇಟ್ ಮಾಡಿಸಿ

ನಿಮ್ಮ ಆಧಾರ್ ದಾಖಲೆ ಅಪ್​ಡೇಟ್ ಮಾಡುವುದಿದ್ದರೆ ಆನ್​ಲೈನ್​ನಲ್ಲಿ ಮೈ ಆಧಾರ್ ಪೋರ್ಟಲ್ ಮೂಲಕ ಮಾಡಬಹುದು. 3 ತಿಂಗಳ ಕಾಲ ಅಂದರೆ ಬರುವ ಜೂನ್ 14ರವರೆಗೆ ಯಾವುದೇ ಶುಲ್ಕವಿಲ್ಲದೇ ಪೋರ್ಟಲ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಲು ಅವಕಾಶ ಕೊಡಲಾಗಿದೆ.

ಆಧಾರ್ ಕಾರ್ಡ್​ನಲ್ಲಿರುವ ಮಾಹಿತಿಯನ್ನು ಅಪ್​ಡೇಟ್ ಮಾಡಲು ಸರಕಾರವು ಒಂದು ಒಳ್ಳೆಯ ಯೋಜನೆಯನ್ನು ಜಾರಿಗೆ ತಂದಿದೆ. ಹೌದು ಸ್ನೇಹಿತರೆ ನಮ್ಮ ಆಧಾರ್ ಕಾರ್ಡ್ನಲ್ಲಿ ಏನಾದರು ತಿದ್ದುಪಡಿ ಮಾಡಬೇಕೆಂದರೆ ನಾವು ಅಧಾರ್ ಕೇಂದ್ರಕ್ಕೆ ಹೋಗಿ ಇಂತಿಷ್ಟು ಶುಲ್ಕ ಪಾವತಿಸಬೇಕಾಗುತ್ತಿತ್ತು. ಆದರೆ ಇದೀಗ ಅನ್​ಲೈನ್​ನಲ್ಲೇ ಆಧಾರ್ ಡಾಕ್ಯುಮೆಂಟ್ ಅಪ್​ಡೇಟ್ ಮಾಡುವ ಅವಕಾಶವನ್ನು ಸರ್ಕಾರ ಭಾರತ ಜನತೆಗೆ ಕಲ್ಪಿಸಿದೆ.

Join Our WhatsApp Group Here:

ಆದರೆ, ಈ ಸೇವೆ ೩ ತಿಂಗಳವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಅಂದರೆ ೩ ತಿಂಗಳವರೆಗೆ ಇದಕ್ಕೆ ನೀವು ಯಾವುದೇ ಶುಲ್ಕವನ್ನು ಪಾವತಿಸಲು ಇರುವುದಿಲ್ಲ. ಮಾಹಿತಿಯ ಪ್ರಕಾರ 2023 ಮಾರ್ಚ್ 15ರಿಂದ 2023 ಜೂನ್ 14ರವರೆಗೆ ಮೈ ಆಧಾರ್ ಪೋರ್ಟಲ್​ನಲ್ಲಿ ಆಧಾರ್ ಮಾಹಿತಿಯನ್ನು ಉಚಿತವಾಗಿ ಅಪ್​ಡೇಟ್ ಮಾಡಬಹುದು.

ರೈತರಿಗೊಂದು ಸಿಹಿ ಸುದ್ದಿಇನ್ನು ನಿಮಗೆ ಸಾಲಕ್ಕೆ ಅಲ್ಲಿ ಇಲ್ಲಿ ಓಡಾಡಬೇಕಿಲ್ಲ ಅಂಚೆಕಚೇರಿಯಲ್ಲೇ ಸಾಲ, ಅಲ್ಲೇ ಮರುಪಾವತಿ

ಇದನ್ನು ನೀವು ಆಧಾರ್ ಕೇಂದ್ರಗಳಿಗೆ ಹೋಗಿಯೂ ಅಪ್ಡೇಟ್ ಮಾಡಬಹುದು. ಆದರೆ ಅಲ್ಲಿ ನೀವು ಹಿಂದಿನಂತೆ 50 ರುಪಾಯಿ ಶುಲ್ಕ ಕೊಡಬೇಕಾಗುತ್ತದೆ. ಈ ಅಪ್ಡೇಟ್ಸ್ ಗಳು ಆಧಾರ್​ನಲ್ಲಿ ವಂಚನೆ ಸಾಧ್ಯತೆಯನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

Karnataka Ganga Kalyana Scheme 2023 | ಕರ್ನಾಟಕ ಗಂಗಾ ಕಲ್ಯಾಣ ಯೋಜನೆ 2023

ಆನ್​ಲೈನ್​ನಲ್ಲಿ ಆಧಾರ್ ದಾಖಲೆ ಅಪ್​ಡೇಟ್ ಹೀಗೆ ಮಾಡಿ

ನೀವು ಆಧಾರ್ ಕೇಂದ್ರಕ್ಕೆ ಹೋಗದೇ ಆನ್​ಲೈನ್​ನಲ್ಲೇ ಆಧಾರ್ ದಾಖಲೆಗಳನ್ನು ಅಪ್​ಡೇಟ್ ಮಾಡಬೇಕೆಂದರೆ ಮೊದಲಿಗೆ ಮೈ ಆಧಾರ್ ಪೋರ್ಟಲ್​ಗೆ ಭೇಟಿನೀಡಿ. ಅಲ್ಲಿ ನಿಮ್ಮ ಆಧಾರ್ ನಂಬರ್ ಏನಿದೆ ಅದೇ ಯೂಸರ್ ನೇಮ್ ಆಗಿರುತ್ತದೆ. ನಂತರ ನಿಮ್ಮ ಆಧಾರ್ ಜೊತೆಗೆ ನೊಂದಾಯಿತವಾದ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ. ಆ ಒಟಿಪಿ ಅಂಕೆಯನ್ನು ನಮೂದಿಸಿ ಮೈ ಆಧಾರ್ ಪೋರ್ಟಲ್​ಗೆ ಲಾಗಿನ್ ಆಗಬಹುದು.
ಆನ್​ಲೈನ್​ನಲ್ಲಿ ಶುಲ್ಕವಿಲ್ಲದೇ ಆಧಾರ್ ಮಾಹಿತಿ ಅಪ್​ಡೇಟ್ ಮಾಡಲು ಅವಕಾಶ ಇರುವುದು ಮೈ ಆಧಾರ್ ಪೋರ್ಟಲ್​ನಲ್ಲಿ ಮಾತ್ರ ಬೇರೆಲ್ಲೂ ಸಾಧ್ಯವಿಲ್ಲ.

Prachi

NCERT-NOTES Class 6 to 12.

Related Articles

Leave a Reply

Your email address will not be published. Required fields are marked *

Back to top button